ಸುಂದರ ಹುಡುಗಿಯೊಂದಿಗೆ ರಾಹುಲ್ ಗಾಂಧಿಯವರ ಸೆಲ್ಫಿ ಕ್ಷಣ | Oneindia Kannada

2017-11-02 580

During his road show at Bharuch in Gujarat, A Young Girl got on top of the campaign vehicle to click selfies with Rahul Gandhi. In the viral video, The Girl got on board Rahul Gandhi's van. Soon, The Congress President helped her get down from the vehicle and even shook hands with her. He then obliged the request of the girl to pose for a selfie.


ಮೊದಲೇ ಕೆಂಪಕೆಂಪಗೆ ಇರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆ ಕ್ಷಣದಲ್ಲಿ ಮತ್ತಷ್ಟು ರಂಗೇರಿದ್ದರು. ಮದುವೆ ವಿಷಯ ಎತ್ತಿದ ಕೂಡಲೆ ಮಾರುದ್ದ ನೆಗೆಯುವ 47 ವರ್ಷದ ಬ್ರಹ್ಮಚಾರಿ ರಾಹುಲ್ ಮುಖ ಮತ್ತಷ್ಟು ಕೆಂಪೇರಿತ್ತು! ಇದಕ್ಕೆ ಕಾರಣ ಆ ಚೆಲುವಾಂತ ಚೆನ್ನಿ ಕ್ಲಿಕ್ಕಿಸಿದ ಒಂದು ಸೆಲ್ಫಿ. ನೀಲಿ ಬಣ್ಣದ ಜೀನ್ಸ್ ಮೇಲೆ ಬೂದು ಬಣ್ಣದ ಅಂಗಿ ತೊಟ್ಟಿದ್ದ ವಯಸ್ಸಿಗೆ ಬಂದ ಆ ಯುವತಿಯ ಅದೃಷ್ಟವೋ ಅದೃಷ್ಟ. ಭಾವೀ ಪ್ರಧಾನಿ ಎಂದೇ ಬಿಂಬಿತವಾಗುತ್ತಿರುವ ಯುವರಾಜನ ಹೆಗಲ ಮೇಲೆ ಕೈಹಾಕಿ ಸೆಲ್ಫಿ ತೆಗೆಸಿಕೊಳ್ಳುವ ಯೋಗಾಯೋಗ ಎಷ್ಟು ಅದೃಷ್ಟವತಿಯರಿಗೆ ಸಿಗುತ್ತದೆ?ಅತ್ಯಂತ ಸರಳ ವ್ಯಕ್ತಿತ್ವದ ರಾಹುಲ್ ಗಾಂಧಿ ಎಂದರೇನೇ ಭಾರೀ ಬಿಗಿ ಬಂದೋಬಸ್ತು. ಆಗಾಗ ಪ್ರಟೋಕಾಲ್ ಮುರಿದು ಜನರೆಡೆಗೆ ಅವರು ಮುನ್ನುಗ್ಗುತ್ತಾರಾದರೂ, ಅವರ ಸುತ್ತ ಬ್ಲಾಕ್ ಕಮಾಂಡೋಗಳ ಪಡೆ ಇದ್ದೇ ಇರುತ್ತದೆ.